ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಮೇಲ್ವಿಚಾರಣೆ ಮತ್ತುಮೌಲ್ಯಮಾಪನ ಪ್ರಾಧಿಕಾರಕ್ಕೆ ಸುಸ್ವಾಗತ

 

ಕರ್ನಾಟಕ ಸರ್ಕಾರವು 2000ನೇ ಇಸವಿಯಲ್ಲಿ  ಒಂದು ಮೌಲ್ಯಮಾಪನ  ನೀತಿಯನ್ನು  ಸರ್ಕಾರಿ ಆದೇಶ ಸಂಖ್ಯೆ: ಐಎಫ್‍ಎಸ್ 42 ಇವಿಎಫ್ (1) 1999 ಬೆಂಗಳೂರು  ದಿನಾಂಕ 17-09-2000 ರನ್ವಯ ರೂಪಿಸಿರುತ್ತದೆ. ಈ ನೀತಿಯ ಪ್ರಕಾರ   ರೂ. 1 ಕೋಟಿ ವೆಚ್ಚದ ಏಲ್ಲಾ ಯೋಜನೆಗಳನ್ನು (ಯೋಜನಾ) ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯಾದರೂ ಮೌಲ್ಯಮಾಪನ ಮಾಡಬೇಕಾಗಿದ್ದು, ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಮತ್ತು ಸಾರ್ವಜನಿಕ ನಿಧಿಗಳನ್ನು ಒಳಗೊಂಡ ಘಟಕಗಳು ತಮ್ಮ ಕಾರ್ಯಕ್ರಮ/ ಯೋಜನೆಯ ಒಟ್ಟು ವಂಟನೆಗಳ ಶೇಕಡಾ 1ರಷ್ಟು ರೂ. 5ಲಕ್ಷ ಗರಿಷ್ಠ ಮಿತಿಗೊಳಪಟ್ಟು ಹಣವನ್ನು ಮೌಲ್ಯಮಾಪನ ಉದ್ದೇಶಕ್ಕಾಗಿ ಮೀಸಲಿಡಬೇಕಾಗಿರುತ್ತದೆ. ಯೋಜನಾ ಅವಧಿಯನ್ನು ಮೀರಿ ಒಂದು ಕಾರ್ಯಕ್ರಮ/ ಯೋಜನೆಯನ್ನು ಮುಂದುವರೆಸಬೇಕಾದರೆ ಅದನ್ನು ಮೌಲ್ಯಮಾಪನದಿಂದಲೇ ಸಮರ್ಥಿಸಬೇಕಾಗಿರುತ್ತದೆ.  ಪ್ರಾರಂಭದಲ್ಲಿ  ಸಂಬಂಧಿಸಿದ ಇಲಾಖೆಯ ಮೌಲ್ಯಮಾಪನ ಸಮಿತಿ ಮತ್ತು ರಾಜ್ಯ ಮೌಲ್ಯಮಾಪನ ಸಮನ್ವಯ ಸಮಿತಿಗಳಿಂದ ಮೌಲ್ಯಮಾಪನ ನೀತಿಯನ್ನು ಅನುಷ್ಟಾನಗೊಳಿಸಲಾಗುತ್ತಿತ್ತು.

  

ಸರ್ಕಾರಿ ಆದೇಶ ಸಂಖ್ಯೆ: ಪಿಡಿ/8/ಇವಿಎನ್(2) ದಿನಾಂಕ: 11-07-2011 ರಂದು, ರಾಷ್ಟ್ರದಲ್ಲಿಯೇ ಮೊಟ್ಟಮೊದಲನೆಯದಾದ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವನ್ನು ಮೌಲ್ಯಮಾಪನ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುತ್ತದೆ.  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960ರಡಿ ಸಂಖ್ಯೆ: ಡಿಆರ್‍ಬಿ-ಸಿ/ಎಸ್‍ಒಆರ್/140/2011-12ರನ್ವಯ ದಿನಾಂಕ:19-09-2011 ರಂದು ಒಂದು ಸಂಘವಾಗಿ ನೋಂದಾಯಿಸಲ್ಪಟ್ಟಿರುತ್ತದೆ. ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಕಾರ್ಯ ಚಟುವಟಿಕೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರವು ಆಯವ್ಯಯ ಅನುದಾನವನ್ನು ಒದಗಿಸುತ್ತದೆ. ಇದು ಐಎಸ್‍ಓ(ಇಂಟರ್‍ನ್ಯಾಶನಲ್ ಆರ್ಗನೈಜೇಶನ್) 9001:2015 ಪ್ರಮಾಣೀಕೃತ ಸಂಸ್ಥೆಯಾಗಿರುತ್ತದೆ. ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಅಂತರ್‍ರಾಷ್ಟ್ರೀಯ ಸಂಸ್ಥೆಯಾದ 3ಐಇ (ಇಂಟರ್‍ನ್ಯಾಶನಲ್ ಇನಿಶಿಯೇಟಿವ್ ಫಾರ್ ಇಂಪ್ಯಾಕ್ಟ್ ಇವ್ಯಾಲ್ಯುಯೇಶನ್ಸ್)ನ ಸದಸ್ಯತ್ವವನ್ನು ಪಡೆದಿರುತ್ತದೆ. ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಎಲ್ಲಾ ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ ಅವರು ಮೌಲ್ಯಮಾಪನ ಕಾರ್ಯಗಳನ್ನು ಕೈಗೊಳ್ಳಲು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ,  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ತನ್ನ ಸ್ವಂತ ಸಂಪನ್ಮೂಲಗಳೋಂದಿಗೆ, ಪ್ರಮುಖ ವಿಷಯಗಳ ಮೇಲೆ ವಿಷಯಾಧಾರಿತ/ಪರಿಕಲ್ಪನಾ ಮೌಲ್ಯಮಾಪನಗಳನ್ನು ಕೈಗೊಳ್ಳುತ್ತದೆ. ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆಯನ್ನು ಒದಗಿಸುತ್ತದೆ. 

 

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ವ್ಯವಹಾರವು ಈ ಕೆಳಗಿನ ಸಂಸ್ಥೆಗಳಿಂದ/ಅಧಿಕಾರಿಗಳಿಂದ ವೀಕ್ಷಿಸಲ್ಪಡುತ್ತದೆ.

 

1.  ಸಾಮಾನ್ಯ ಮಂಡಳಿ: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆ ವಹಿಸುವರು
2.  ಆಡಳಿತ ಮಂಡಳಿ: ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು -ಯೋಜನಾ ಇಲಾಖೆ ಅಧ್ಯಕ್ಷತೆ ವಹಿಸುವರು
3.  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಮುಖ್ಯಸ್ಥರು: ಮುಖ್ಯ ಮೌಲ್ಯಮಾಪನಾಧಿಕಾರಿ
4. ತಾಂತ್ರಿಕ ಸಮಿತಿ: ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು -ಯೋಜನಾ ಇಲಾಖೆ ಅಧ್ಯಕ್ಷತೆ ವಹಿಸುವರು. ಉಲ್ಲೇಖ ನಿಯಮಗಳು, ಪ್ರಾರಂಭಿಕ ವರದಿಗಳು ಮತ್ತು ಕರಡು ಮೌಲ್ಯಮಾಪನ ವರದಿಗಳಿಗೆ ಈ ಸಮಿತಿಯು ಅನುಮೋದನೆಯನ್ನು ನೀಡುತ್ತದೆ.
5.  ಇತರೆ ಸಮಿತಿಗಳು: ಎಂಪೆನಲ್‍ಮೆಂಟ್(ದಾಖಲಾತಿ) ಸಮಿತಿಟೆಂಡರ್ ಸಮಿತಿಗಳು, ಸ್ಯಾಂಪ್ಲಿಂಗ್(ಮಾದರಿ) ಸಮಿತಿ ಇತ್ಯಾದಿಗಳು

 

ಅವುಗಳ ಸ್ವರೂಪದ ಹೊರತಾಗಿ, ಎಲ್ಲಾ ಮೌಲ್ಯಮಾಪನಗಳನ್ನು ಕೈಗೊಳ್ಳಲು ಸ್ವತಂತ್ರ ಬಾಹ್ಯ ಮೌಲ್ಯಮಾಪಕರಿಗೆ ವಹಿಸಲಾಗಿರುತ್ತದೆ. ಇವುಗಳ ಸಂಕ್ಷಿಪ್ತ ಪ್ರಕ್ರಿಯೆಯು ಈ ಕೆಳಗಿನಂತಿದೆ.  

 

• ಸಂಬಂಧಿಸಿದ ಇಲಾಖೆಯೊಂದಿಗೆ ಸಮಾಲೋಚಿಸಿ, ಉಲ್ಲೇಖ ನಿಯಮಗಳನ್ನು ತಯಾರಿಸಲಾಗುತ್ತದೆ.
• ತಾಂತ್ರಿಕ ಸಮಿತಿಯು ಉಲ್ಲೇಖ ನಿಯಮಗಳಿಗೆ ಅನುಮೋದನೆಯನ್ನು ನೀಡುತ್ತದೆ ಮತ್ತು ನಂತರದಲ್ಲಿ ಟೆಂಡರ್ ಪ್ರಕ್ರಿಯೆಯು ಇದನ್ನು ಅನುಸರಿಸುತ್ತದೆ.
• ಮೌಲ್ಯಮಾಪನ ಅಧ್ಯಯನ ಮಾಡುವ ಕೆಲಸವನ್ನು ತಜ್ಞ ಮೌಲ್ಯಮಾಪನ ಸಂಸ್ಥೆಗಳಿಗೆ ಹೊರಗುತ್ತಿಗೆಗೆ ನೀಡಲಾಗುತ್ತದೆ.
• ಕರ್ನಾಟಕದ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದಂತೆ, ಮೌಲ್ಯಮಾಪನ ಸಮಾಲೋಚಕ ಸಂಸ್ಥೆಗಳನ್ನು ಟೆಂಡರ್ ಮೂಲಕವಾಗಿ ಆಯ್ಕೆ ಮಾಡಲಾಗುತ್ತದೆ.
• ಕಡಿಮೆ ವೆಚ್ಚದ ಆಯ್ಕೆ ವಿಧಾನ(ಎಲ್‍ಸಿಎಸ್) ಮತ್ತು ಗುಣಮಟ್ಟ ಹಾಗೂ ವೆಚ್ಚ ಆಧಾರಿತ ಆಯ್ಕೆ ವಿಧಾನ (ಕ್ಯೂಸಿಬಿಎಸ್)ಗಳಡಿಯಲ್ಲಿ ಟೆಂಡರ್‍ಗಳನ್ನು ಅಹ್ವಾನಿಸಲಾಗುತ್ತದೆ.
• ಆಯ್ಕೆಯಾದ ಮೌಲ್ಯಮಾಪನ ಸಮಾಲೋಚಕ ಸಂಸ್ಥೆಯು ಅಧ್ಯಯನವನ್ನು ಕೈಗೊಳ್ಳಲು, ಮೊದಲಿಗೆ ಕಾರ್ಯ ಯೋಜನೆ/ಪ್ರಾರಂಭಿಕ ವರದಿಯನ್ನು ಸಲ್ಲಿಸುತ್ತದೆ.
• ಪ್ರಾರಂಭಿಕ ವರದಿಗೆ ತಾಂತ್ರಿಕ ಸಮಿತಿಯಿಂದ ಅನುಮೋದನೆಯು ದೊರಕಿದ ನಂತರದಲ್ಲಿ, ಕರಡು ಮೌಲ್ಯಮಾಪನ ವರದಿಯನ್ನು ತಯಾರಿಸಲಾಗುತ್ತದೆ.
• ಕರಡು ಮೌಲ್ಯಮಾಪನ ವರದಿಗೆ ತಾಂತ್ರಿಕ ಸಮಿತಿಯಿಂದ ಅನುಮೋದನೆಯು ದೊರಕುತ್ತದೆ.
• ಕರಡು ಮೌಲ್ಯಮಾಪನ ವರದಿಗಳನ್ನು ಪಟ್ಟಿಮಾಡಲಾದ(ಎಂಪೆನಲ್‍ಡ್) ಸ್ವತಂತ್ರ ಮೌಲ್ಯಮಾಪಕರು ಸಹಾ ಮೌಲ್ಯಮಾಪನ ಮಾಡುತ್ತಾರೆ.
• ಅನುಮೋದಿತ ಅಂತಿಮ ಮೌಲ್ಯಮಾಪನ ವರದಿಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗುತ್ತದೆ.
• ವರದಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುತ್ತದೆ ಹಾಗೂ ಕ್ರಮ ಕೈಗೊಂಡ ವರದಿಗಳಿಗಾಗಿ ಮನವಿಮಾಡಲಾಗುತ್ತದೆ.
• ಎಲ್ಲಾ ವರದಿಗಳನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಜಾಲತಾಣಕ್ಕೆ ವರ್ಗಾಯಿಸಲಾಗುತ್ತದೆ. (ಅಪ್‍ಲೋಡ್)
• ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಎಲ್ಲಾ ಕೆಲಸಗಳನ್ನು ಅಡಳಿತ ಮಂಡಳಿ ಮತ್ತು ಸಾಮಾನ್ಯ ಮಂಡಳಿಯ ಮುಂದೆ ಮಂಡಿಸಲಾಗುತ್ತದೆ.

 

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಭವಿಷ್ಯದ ಯೋಜನೆಗಳು ಈ ಕೆಳಕಂಡಂತಿವೆ:


1. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮೌಲ್ಯಮಾಪನ ಅಧ್ಯಯನಗಳ ಗುಣಮಟ್ಟ ಸುಧಾರಿಸುವುದು.
2. ತಜ್ಞರುಗಳ ಆಧಾರವನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಲ್ಲಿ ಏರಿಸುವುದು- ಪಟ್ಟಿ ಮಾಡಲಾದ ಸಮಾಲೋಚಕರ ಸಂಸ್ಥೆಗಳು ಮತ್ತು ಸ್ವತಂತ್ರ ಮೌಲ್ಯಮಾಪಕರು
3. ಸಂಬಂಧಿಸಿದ ಇಲಾಖೆಗಳಿಂದ ಮೌಲ್ಯಮಾಪನ ಅಧ್ಯಯನಗಳ ಮೇಲೆ ಕ್ರಮ ಕೈಗೊಂಡ ವರದಿಗಳಿಗಾಗಿ ಒತ್ತು ನೀಡುವುದು.
4. ಸಾಮಥ್ರ್ಯ ನಿರ್ಮಾಣ ಮಾಡುವುದು.
5. ಕರ್ನಾಟಕ ರಾಜ್ಯದಾಚೆಗೆ ಮೌಲ್ಯಮಾಪನ ಪ್ರಾಧಿಕಾರದ ಚಟುವಟಿಕೆಗಳನ್ನು ವಿಸ್ತರಿಸುವುದು.

ಇತ್ತೀಚಿನ ನವೀಕರಣ​ : 17-05-2023 12:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080