ಅಭಿಪ್ರಾಯ / ಸಲಹೆಗಳು

ಆಂತರಿಕ ಅಧ್ಯಯನಗಳು ಮತ್ತು ಇತರೆ ಯೋಜನೆಗಳು

 

ಕರ್ನಾಟಕ ರಾಜ್ಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಮೇಲಿನ ಆಂತರಿಕ ಮೌಲ್ಯಮಾಪನ ಅಧ್ಯಯನವನ್ನು ಕರ್ನಾಟಕ ಸರ್ಕಾರಕ್ಕಾಗಿ ಕೈಗೊಂಡಿರುವುದು

  

ವರದಿಯನ್ನು ದಿ: 15-02-2018 ರಂದು ಸಲ್ಲಿಸಲಾಗಿರುತ್ತದೆ

 

2017ರ ನವೆಂಬರ್ 23ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳು ಬೆಳಗಾವಿಯ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಾತನಾಡುತ್ತಾ ಪ್ರಾದೇಶಿಕ ಅಸಮತೋಲನಗಳ ನಿವಾರಣೆಗಾಗಿ ರಚಿಸಲಾದ ಉನ್ನತಾಧಿಕಾರದ ಸಮಿತಿಯ ವರದಿಯಲ್ಲಿನ 114 ತಾಲ್ಲೂಕುಗಳ ಅಭಿವೃದ್ಧಿಯ ಸ್ಥಿತಿಯು 2007-08ರಿಂದ ಅನುಷ್ಟಾನಗೊಳಿಸಲಾದ ವಿಶೇಷ ಅಭಿವೃದ್ಧಿ ಯೋಜನೆಯ ಕಾರಣದಿಂದ ಅಕ್ಟೋಬರ್ 2017ರವರೆಗೆ ಎಷ್ಟರ ಮಟ್ಟಿಗೆ ಪ್ರಾದೇಶಿಕ ಅಸಮತೋಲನವನ್ನು ಸುಧಾರಿಸಿದೆ ಎಂಬುದನ್ನು ಅಭ್ಯಸಿಸಲು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಅಧ್ಯಯನವನ್ನು ಮಾಡುತ್ತದೆ ಎಂದು ಫೋಷಿಸಿರುತ್ತಾರೆ. ಆಂತರಿಕ ಅಧ್ಯಯನವಾಗಿ ಈ ಮೌಲ್ಯಮಾಪನ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. ಈ ಅಧ್ಯಯನವನ್ನು ಪೂರ್ಣಗೊಳಿಸಲಾಗಿದ್ದು, ಫೆಬ್ರವರಿ 2018ರಂದು ಈ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ.


ಅಪರ ಮುಖ್ಯ ಮೌಲ್ಯಮಾಪನ ಅಧಿಕಾರಿ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಇವರು ಈ ಅಧ್ಯಯನವನ್ನು ಸಂಘಟಿಸಿರುತ್ತಾರೆ.

 

ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಇತರೆ ಯೋಜನೆಗಳು

 

 • 25-09-2015ರಂದು ಜರುಗಿದ ಸಂಯುಕ್ತ ರಾಷ್ಟ್ರ ಸಂಸ್ಥೆಯ 70ನೇ ಅಧಿವೇಶನದ ಸಾಮಾನ್ಯ ಸಭೆಯಲ್ಲಿ “ನಮ್ಮ ಜಗತ್ತನ್ನು ರೂಪಾಂತರಗೊಳಿಸುವುದು; 2030ರ ಸುಸ್ಥಿರ ಅಭಿವೃದ್ಧಿಗಾಗಿ ವಿಷಯ” ಎಂಬ ಶೀರ್ಷಿಕೆಯ ದಾಖಲೆಯನ್ನು ಅಂಗೀಕರಿಸಿರುತ್ತಾರೆ. ಇದರಲ್ಲಿ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಸಂಯುಕ್ತಗೊಳಿಸಿದ 169 ಲಕ್ಷ್ಯಗಳು ಒಳಗೊಂಡಿರುತ್ತವೆ. ಸುಸ್ಥಿರ ಅಭಿವೃದ್ಧಿ ಗುರಿಗಳು ಬಡತನದ ಮೂಲ ಕಾರಣಗಳನ್ನು ಪರಿಹರಿಸುವುದಲ್ಲದೇ ಎಲ್ಲರಿಗೂ ಘನತೆಯ ಜೀವನವನ್ನು ಒದಗಿಸಲು ಸಾರ್ವತ್ರಿಕ ಅಗತ್ಯತೆಯನ್ನು ಪೂರೈಸಲು ಪ್ರಯತ್ನಿಸುತ್ತದೆ. ಕರ್ನಾಟಕ ರಾಜ್ಯವು ಸುಸ್ಥಿರ ಅಭಿವೃದ್ಧಿ ಗುರಿಗಳ ಮತ್ತು ಲಕ್ಷ್ಯಗಳ ಅನುಷ್ಟಾನ ಮತ್ತು ಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡಿರುತ್ತದೆ. 2030ರಲ್ಲಿ ಕರ್ನಾಟಕದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಕಾರ್ಯತಂತ್ರಗಳನ್ನು ರೂಪಿಸಲು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಬೆಂಬಲಿಸುತ್ತಿದೆ.
 • ಕರ್ನಾಟಕದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಗಳನ್ನು ರೂಪಾಂತರಗೊಳಿಸುವ ಕಾರ್ಯಯೋಜನೆಯಲ್ಲಿ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಸಹಕರಿಸುತ್ತಿದೆ.
 • ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಕರ್ನಾಟಕ ರಾಜ್ಯ ಮಾನವ ಅಭಿವೃದ್ಧಿ ವರದಿಯ ಸಿದ್ಧತೆಯನ್ನು ಸಹಕರಿಸಲು ಬೆಂಬಲಿಸಿರುತ್ತದೆ ಮತ್ತು ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನವ ಅಭಿವೃದ್ಧಿ ವರದಿಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುತ್ತದೆ.
 • ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಲ್ಲಿನ ಆಂತರಿಕ ತರಬೇತಿ ಕಾರ್ಯಕ್ರಮದಡಿ (ಇಂಟರ್ರ್‍ಶಿಪ್ ಕಾರ್ಯಕ್ರಮ) ರಾಷ್ಟ್ರೀಯ ಕಾನೂನು ಶಾಲೆ ಭಾರತದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಓರ್ವರು ಆಂತರಿಕ ತರಬೇತಿಯನ್ನು ಪೂರ್ಣಗೊಳಿಸಿರುತ್ತಾರೆ.

 

ಮೌಲ್ಯಮಾಪನ ಪರಿಣಾಮ-ಶಿಫಾರಸ್ಸುಗಳ ಮೇಲೆ ಕೈಗೊಂಡ ಕ್ರಮಗಳು

 

 • ಉದ್ಯೋಗಿನಿ ಯೋಜನೆಯ ಮೌಲ್ಯಮಾಪನ ವರದಿಯಲ್ಲಿನ ಶಿಫಾರಸ್ಸುಗಳ ಪ್ರಕಾರವಾಗಿ, ಸರ್ಕಾರವು 2018-19ನೇ ಆಯವ್ಯಯದಲ್ಲಿ ಸಾಲದ ಗರಿಷ್ಟ ಮಿತಿಯನ್ನು ರೂ. ಒಂದು ಲಕ್ಷದಿಂದ ಮೂರು ಲಕ್ಷದವರೆಗೆ ವಿಶೇಷ ವರ್ಗದ ಮತ್ತು ಸಾಮಾನ್ಯ ವರ್ಗದ ಮಹಿಳೆಯರಿಗೆ ಹೆಚ್ಚಿಸಲಾಗಿರುತ್ತದೆ, ಸಹಾಯಧನವನ್ನು ಸಾಲ ಮೊತ್ತದ ಶೇಕಡಾ 30ರಷ್ಟು, ಕುಟುಂಬದ ಆದಾಯ ಮಿತಿಯನ್ನು ರೂ. 1.5 ಲಕ್ಷಗಳಿಗೆ ಹಾಗೂ ಎಲ್ಲಾ ವರ್ಗಗಳಿಗೂ ವಯೋಮಿತಿಯನ್ನು 45ರಿಂದ 55 ವರ್ಷಗಳವರೆಗೆ ಹೆಚ್ಚಿಸಲಾಗಿರುತ್ತದೆ.
 • ಕರ್ನಾಟಕ ರಾಜ್ಯದಲ್ಲಿನ ಸಾಂತ್ವಾನ ಯೋಜನೆಯ ಮೌಲ್ಯಮಾಪನ ವರದಿಯಲ್ಲಿನ ಶಿಫಾರಸ್ಸುಗಳ ಪ್ರಕಾರವಾಗಿ, ಇಲಾಖೆಯು ಯಾತನೆಯಲ್ಲಿರುವ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುತ್ತದೆ ಮತ್ತು ಸಾಂತ್ವಾನ ಕೇಂದ್ರಗಳ ಆಡಳಿತ ನಿರ್ವಹಣೆಗಾಗಿ ಗುಣಮಟ್ಟದ ಕಾರ್ಯಚರಣೆ ಪ್ರಕ್ರಿಯೆಗಳನ್ನು ತಯಾರಿಸುತ್ತಿದೆ.
 • ತಾಯಿ ಭಾಗ್ಯ ಯೋಜನೆಯ ಮಡಿಲು ಕಾರ್ಯಕ್ರಮಗಳ ಪರಿಣಾಮಗಳ ಮೇಲಿನ ಅಧ್ಯಯನದಲ್ಲಿನ ಶಿಫಾರಸ್ಸುಗಳ ಆಧಾರದಲ್ಲಿ ಮಡಿಲು ಕಿಟ್‍ನ ಅಡಕಗಳ ಗುಣಮಟ್ಟವು ಸುಧಾರಣೆಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-06-2023 09:04 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080