ಅಭಿಪ್ರಾಯ / ಸಲಹೆಗಳು

ಆಂತರಿಕ ಮೌಲ್ಯಮಾಪನ ದರ್ಜೆಯ ವರದಿಗಳು

  

ಕ್ರ ಸಂ

ಇಲಾಖೆಗಳಿಂದ ಆಂತರಿಕ ಮೌಲ್ಯಮಾಪನ

1

ಇಲಾಖೆಗಳಿಂದ ಮೌಲ್ಯಮಾಪನ ಸಂಸ್ಥೆಗಳಿಗೆ ವಹಿಸಲಾದ ಮೌಲ್ಯಮಾಪನ ವರದಿಗಳು ಸಹಾ ಇದೇ ರೀತಿಯ ವಿಮರ್ಶೆಗೆ ಒಳಪಟ್ಟಿರುತ್ತವೆ. ಮೌಲ್ಯಮಾಪನ ಸಂಸ್ಥೆಯಿಂದ ಮೌಲ್ಯಮಾಪನ ವರದಿಯನ್ನು ಇಲಾಖೆಗೆ ಸಲ್ಲಿಸಿದ ನಂತರದಲ್ಲಿ, ಸಂಬಂಧಿಸಿದ ಇಲಾಖೆಯ ಮೌಲ್ಯಮಾಪನ ಸಮಿತಿಯು ಅನುಬಂಧ 1ರಲ್ಲಿ ಸೂಚಿಸಿದಂತೆ ಪ್ರಾಥಮಿಕ ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಈ ಹಂತದಲ್ಲಿ, ಪ್ರಾಥಮಿಕ ಪರಿಶೀಲನೆಯು ಯಾವುದೇ ಮಾರ್ಪಾಡುಗಳನ್ನು ಅಥವಾ ತಿದ್ದುಪಡಿಗಳನ್ನು ಸೂಚಿಸಿದರೆ, ಮೌಲ್ಯಮಾಪನ ವರದಿಯಲ್ಲಿ ಸೂಚಿಸಿದ ಈ ಮಾರ್ಪಾಡುಗಳನ್ನು ಅಳವಡಿಸಲು ಮೌಲ್ಯಮಾಪನ ಸಂಸ್ಥೆಗೆ ವರದಿಯನ್ನು ಕಳುಹಿಸಲಾಗುವುದು ಮತ್ತು ನಂತರ ಅದನ್ನು ಅನುಸರಣೆ ಮಾಡಿ ಇಲಾಖೆಗೆ ಮರುಸಲ್ಲಿಸಲಾಗುವುದು.

2

ಪ್ರಾಥಮಿಕ ಪರಿಶೀಲನೆಯ ನಂತರದಲ್ಲಿ ಯಾವುದೇ ಮಾರ್ಪಾಡುಗಳನ್ನು ಸೂಚಿಸದಿದ್ದರೆ, ಇಲಾಖಾ ಮೌಲ್ಯಮಾಪನ ಸಮಿತಿಯು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಯು ಆಯ್ಕೆ ಮಾಡಿದ ಸತ್ವಂತ್ರ ಮಾಲ್ಯಮಾಪಕರಿಗೆ ಈ ವರದಿಯನ್ನು ಕಳುಹಿಸುತ್ತದೆ. ಸ್ವತಂತ್ರ ಮೌಲ್ಯಮಾಪಕರು ಪರಿಶೀಲನೆಯ ನಂತರದಲ್ಲಿ ಮಾರ್ಪಾಡುಗಳೊಂದಿಗೆ ಅಥವಾ ಮಾರ್ಪಾಡುಗಳಿಲ್ಲದೇ ವರದಿಯನ್ನು ಸ್ವೀಕರಿಸಲು ಇಲಾಖಾ ಮೌಲ್ಯಮಾಪನ ಸಮಿತಿಗೆ ಸಲಹೆಯನ್ನು ಮಾಡಬಹುದು. ವರದಿಯನ್ನು ಮಾರ್ಪಡಿಸಬೇಕೆಂದು ವಿಮರ್ಶೆಯು ಸೂಚಿಸಿದರೆ, ಸಲಹೆಗಳನ್ನು ಅಥವಾ ಬದಲಾವಣೆಗಳನ್ನು ಅಳವಡಿಸಿದ ತರುವಾಯ ವರದಿಯನ್ನು ಮತ್ತಷ್ಟು ಪರಿಶೀಲನೆಗಾಗಿ ಅದೇ ವಿಮರ್ಶಕರಿಗೆ ಇಲಾಖಾ ಮೌಲ್ಯಮಾಪನ ಸಮಿತಯನ್ನು ಕಳುಹಿಸುತ್ತದೆ. ವರದಿಯ ಪರಿಶೀಲನೆಗಾಗಿ ಅನುಬಂಧ 2ರಲ್ಲಿ ನೀಡಲಾದ ಇದೇ ಪ್ರಕ್ರಿಯೆಯನ್ನು ಸ್ವತಂತ್ರ ಮೌಲ್ಯಮಾಪಕರು ಅನುಸರಿಸುತ್ತಾರೆ ಹಾಗೂ ವರದಿಯ ಅಧ್ಯಾಯಗಳಿಗೆ ಪ್ರತಿಯೊಂದು ವಿಭಾಗದ ಮೇಲೆ ವಿವರವಾದ ಅಭಿಪ್ರಾಯದೊಂದಿಗೆ ಅಂಕಗಳನ್ನು ನೀಡುತ್ತಾರೆ ಮತ್ತು ಹಂತ 5ರಲ್ಲಿನ ವಿವರದಂತೆ ವರದಿಗೆ ದರ್ಜೆಯನ್ನು ನೀಡಲಾಗುತ್ತದೆ. ಸ್ವತಂತ್ರ ಮೌಲ್ಯಮಾಪಕರು ಮೌಲ್ಯಮಾಪನ ವರದಿಯನ್ನು ಸ್ವೀಕರಿಸಲು ಮಾಡಿರುವ ಸಲಹೆಯನ್ನು ನಂತರದಲ್ಲಿ ಇಲಾಖಾ ಮೌಲ್ಯಮಾಪನ ಸಮಿತಿಗೆ ಮುಂದಿನ ಅನುಸರಣೆಯ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

3

ಇಲಾಖಾ ಮೌಲ್ಯಮಾಪನ ಸಮಿತಿಯು ಸಂಪೂರ್ಣವಾಗಿ ಅನುಸರಿಸಬೇಕಾದ ಕಾರ್ಯವಿಧಾನವನ್ನು ಅನುಬಂಧ 5ರಲ್ಲಿನ ಚಾಲನಾ ನಕ್ಷೆಯಲ್ಲಿ (ಫ್ಲೋ ಚಾರ್ಟ್) ನೀಡಲಾಗಿರುತ್ತದೆ.

4

ವರದಿಯ ಮೌಲ್ಯಮಾಪನಕ್ಕಾಗಿ ಈ ಹಿಂದೆ ಹಲವು ಹಂತಗಳಿಗೆ ಸಲಹೆಮಾಡಿದ ಕಾಲಾವಧಿಯು ಇಲಾಖಾ ಮೌಲ್ಯಮಾಪನ ಸಮಿತಿಯು ನಿಯೋಜಿಸಿದ ಮೌಲ್ಯಮಾಪನಕ್ಕೂ ಅದೇ ಆಗಿರುತ್ತದೆ.

ಇತ್ತೀಚಿನ ನವೀಕರಣ​ : 13-06-2023 09:08 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080