ಅಭಿಪ್ರಾಯ / ಸಲಹೆಗಳು

ನಿರ್ಬಂಧ

ಸೆಕ್ಟರ್ 4 ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳ ಕರ್ತವ್ಯಗಳು

 

ಪರಿಚ್ಛೇದ 4ರ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳ ಬಾಧ್ಯತೆಗಳು

 

ಮಾಹಿತಿ ಹಕ್ಕು ಅಧಿನಿಯಮ 2005ರ ಪರಿಚ್ಛೇದ 4(1)(ಬಿ)(1) ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳ ಬಾಧ್ಯತೆಗಳು

 

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

 

(ಎ) ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

• ಇಲ್ಲಿ ಅಧ್ಯಕ್ಷರು ಅಂದರೆ ಆಡಳಿತ ಮಂಡಳಿಯ ಅಧ್ಯಕ್ಷರು ಆಗಿರುತ್ತಾರೆ.
• ಎಲ್ಲಾ ಆಡಳಿತ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸುವುದು ಮತ್ತು ಸರಿಯಾಗಿ ಸಭೆಯನ್ನು ನಡೆಸುವುದು.
• ಸಂಘದ ಕೆಲಸಕ್ಕೆ ಜವಾಬ್ದಾರರಾಗುವುದು.
• ಸಂಘದ ಒಟ್ಟಾರೆ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳನ್ನು ನಿರ್ದೇಶಿಸುವುದು.
• ಪ್ರಧಾನ ಕಾರ್ಯದರ್ಶಿಗಳ/ಕಾರ್ಯದರ್ಶಿಗಳ ನಿಯೋಜಿತ ಹಣಕಾಸು ಅಧಿಕಾರಗಳ ಪ್ರಕಾರ ಮಾಡಲಾದ ವೆಚ್ಚವನ್ನು ಅನುಮೋದಿಸುವುದು 
• ಆಯವ್ಯಯದಲ್ಲಿ ಇರದ ಐಟಂನ ರೂ. ಐದು ಲಕ್ಷದವರೆಗಿನ ವೆಚ್ಚಕ್ಕೆ ಒಂದು ಸಲಕ್ಕೆ ಅನುಮೋದನೆಯನ್ನು ನೀಡುವುದು
• ಆಡಳಿತ ಮಂಡಳಿಯ ವಿಶೇಷ ಸಭೆಗಳನ್ನು ಕರೆಯುವುದು.
 
 

 (ಬಿ) ಮುಖ್ಯ ಮೌಲ್ಯಮಾಪನಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

• ಸಾಮಾನ್ಯ ಮಂಡಳಿ ಸಭೆಯನ್ನು/ಆಡಳಿತ ಮಂಡಳಿ ಸಭೆಯನ್ನು ಕರೆಯುವುದು
• ಸಂಘದ/ಆಡಳಿತ ಮಂಡಳಿಯ ಎಲ್ಲಾ ದಾಖಲೆಗಳನ್ನು ನಿರ್ವಹಿಸಿ ಇರಿಸುವುದು ಮತ್ತು ಸಂರಕ್ಷಿಸುವುದು.
• ಸಾಮಾನ್ಯ ಮಂಡಳಿ ಸಭೆಯ/ಆಡಳಿತ ಮಂಡಳಿ ಸಭೆಯ ನಡವಳಿಗಳನ್ನು ನಿರ್ವಹಿಸಿ ಇರಿಸುವುದು.
• ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಮತ್ತು ಆಯವ್ಯಯವನ್ನು ಸಕಾಲದಲ್ಲಿ ಆಡಳಿತ ಮಂಡಳಿಗೆ ಸಲ್ಲಿಸುವುದು.
• ಅವರು ಸಂಘದ ಒಟ್ಟಾರೆಯಾಗಿ ಎಲ್ಲಾ ಆಡಳಿತದ ಮತ್ತು ಹಣಕಾಸು ವ್ಯವಹಾರಗಳೂ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವುದು.
• ಸಂಘದ ಎಲ್ಲಾ ಹಣಕಾಸು ವಹಿವಾಟಿನ ಲೆಕ್ಕಪತ್ರಗಳನ್ನು ನಿರ್ವಹಿಸಿ ಇರಿಸುವುದು.
• ಆಡಳಿತ ಮಂಡಳಿಯಿಂದ ನೇಮಿಸಲ್ಪಟ್ಟ ಚಾರ್ಟರ್ಡ್ ಅಕೌಂಟೆಟ್‍ರವರಿಂದ ಲೆಕ್ಕಪತ್ರಗಳ ಪರಿಶೋಧನೆಯನ್ನು ಮಾಡಿಸುವುದು
• ಎಲ್ಲಾ ಸಂಬಂಧಿತ ಮಾಹಿತಿಯನ್ನು ಸರ್ಕಾರಕ್ಕೆ, ಕಾರ್ಯನಿರ್ವಾಹಕ ಸಮಿತಿಗೆ ಮತ್ತು ಸಾಮಾನ್ಯ ಮಂಡಳಿಗೆ ಒದಗಿಸುವುದು.  
• ಸಂಘದ ಎಲ್ಲ ಆಸ್ತಿಗಳನ್ನು ನಿರ್ವಹಿಸುವುದು ಮತ್ತು ಸಂರಕ್ಷಿಸುವುದು. 
• ಕರ್ನಾಟಕ ಸರ್ಕಾರಕ್ಕೆ ಸಕಾಲದಲ್ಲಿ ವಾರ್ಷಿಕ ವರದಿಗಳನ್ನು ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ತಯಾರಿಸುವುದು ಮತ್ತು ಸಲ್ಲಿಸುವುದು. 
• ಅವರು ಖಜಾಂಚಿಗಳ ಜೊತೆಯಲ್ಲಿ ಸಂಘದ ಎಲ್ಲಾ ಚಕ್ಕುಗಳಿಗೆ ಜಂಟಿಯಾಗಿ ಸಹಿಯನ್ನು ಹಾಕಬೇಕು ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನಿಧಿಗಳನ್ನು ನಿರ್ವಹಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ, ತಯಾರಿಸಿದ ವಾರ್ಷಿಕ ಆಯವ್ಯಯ ವರದಿಯ ಮೇಲ್ವಿಚಾರಣೆಯನ್ನು ಮಾಡಿ, ಅದನ್ನು ಆಡಳಿತ ಮಂಡಳಿಗೆ ಮತ್ತು ಸಾಮಾನ್ಯ ಮಂಡಳಿಗೆ  ಪರಿಶೀಲನೆಗಾಗಿ ಮತ್ತು ಅನುಮೋದನೆಗಾಗಿ ಸಲ್ಲಿಸುವುದು.  
• ಹಣಕಾಸು ವರ್ಷದ ಅನುಮೊದಿಸಲ್ಪಟ್ಟ ಆಯವ್ಯಯದ ಪ್ರಕಾರ  ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವುದು ಮತ್ತು ಅದನ್ನು ಅನುಮೋದನೆಗಾಗಿ  ಆಡಳಿತ ಮಂಡಳಿಗೆ  ಸಲ್ಲಿಸುವುದು.
• ಸಂಘದ ತಿಳುವಳಿಕೆಯ ಪತ್ರ (ಮೆಮೋರಾಂಡಮ್ ಆಪ್ ಅಸೋಸಿಯೇಷನ್)ದ ನಿಯಮ 20(ಎಫ್)ನಲ್ಲಿ ಅವರಿಗೆ ನೀಡಲಾದ ಅಧಿಕಾರಗಳ ಪ್ರಕಾರವಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನಿಧಿಗಳನ್ನು ನಿರ್ವಹಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನೌಕರರ ಸಂಬಳ/ಭತ್ಯೆಗಳ ಬಿಲ್ಲುಗಳನ್ನು ಅನುಮೋದಿಸುವುದು.
• ಅವರು ಆಸ್ತಿಗಳ ವಾರ್ಷಿಕ ಪರಿಶೀಲನೆಗಾಗಿ ವ್ಯವಸ್ಥೆ ಮಾಡುವುದು ಮತ್ತು ಪ್ರಮಾಣೀಕರಿಸುವುದು. ವ್ಯತಿರಿಕ್ತತೆಯೇನಾದರೂ ಇದ್ದಲ್ಲಿ ಅದನ್ನು ಆಡÀಳಿತ ಮಂಡಳಿಗೆ ವರದಿ ಸಲ್ಲಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವಿವಿಧ ಅಧಿಕಾರಿಗಳಿಗೆ ಸಾಮಾನ್ಯವಾಗಿ ನಿಯೋಜಿಸಿದ ಹಣಕಾಸು ಅಧಿಕಾರಗಳಲ್ಲಿ ಅವರಿಗೆ ನಿಯೋಜಿಸಿದ ಅಧಿಕಾರಗಳನ್ನು ಅವರು ಚಲಾಯಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವಿವಿಧ ಅಧಿಕಾರಿಗಳಿಗೆ ಸರ್ಕಾರವು ನಿಯೋಜಿಸಿದ ಆಡಳಿತಾತ್ಮಕ ಅಧಿಕಾರಗಳಲ್ಲಿ, ಅವರಿಗೆ ನಿಯೋಜಿಸಿದ ಎಲ್ಲಾ ಅಧಿಕಾರಗಳನ್ನು ಚಲಾಯಿಸುವುದು.
• ಅವರು ಪ್ರಸ್ತುತ ದಾಖಲಾತಿ ಪಟ್ಟಿಯ ಸಮಿತಿಯ(ಸ್ಟ್ಯಾಂಡಿಂಗ್ ಎಂಪೆನಲ್ ಕಮಿಟಿಯ) ಅಧ್ಯಕ್ಷರಾಗಿರುತ್ತಾರೆ 
• ಅವರು ಮೌಲ್ಯಮಾಪನ ಸಮಾಲೋಚಕರ ಮತ್ತು ಸ್ವತಂತ್ರ ಮೌಲ್ಯಮಾಪಕರ  ದಾಖಲಾತಿ ಪಟ್ಟಿಯನ್ನು ಕಛೇರಿಯಲ್ಲಿ ಪರೀಕ್ಷಣೆÉಗೆ   ಒಳಪಡಿಸುವುದು. 
• ಭೌಗೋಳಿಕ ಸ್ಥಳಗಳ, ಇತರೆ ಸೂಕ್ತ ವಿಶೇಷತೆಗಳ ಅನ್ವಯಿಕೆಗಳ ಆಧಾರದ ಮೇಲೆ, ವಿವಿಧ ಗುಂಪುಗಳಾಗಿ ವಿಂಗಡಿಸಿದ ಅರ್ಜಿಗಳ ಕಿರುಪಟ್ಟಿಯನ್ನು ಅವರು ಪಡೆಯುವುದು..
• ಅವರು ವರ್ಗವಾರು ಅರ್ಹ ಸಮಾಲೋಚಕ ಅರ್ಜಿದಾರರ ಪಟ್ಟಿಯನ್ನು ತಯಾರಿಸುವುದು ಮತ್ತು ಅದನ್ನು ಎಂಪನೆಲ್‍ಮೆಂಟ್ ಸಮಿತಿಯ ಮುಂದೆ ಅನುಮೋದನೆಗಾಗಿ ಮಂಡಿಸುವುದು ಹಾಗೂ ಎಲ್ಲಾ ಅನರ್ಹ ಅರ್ಜಿಗಳನ್ನು ತಿರಸ್ಕರಿಸುವುದು.
• ಅವರು ಸಮಾಲೋಚಕ ಅರ್ಜಿದಾರರ ಅಹವಾಲುಗಳನ್ನು ಆಲಿಸಿ ಪರಿಶೀಲಿಸುವುದು ಮತ್ತು ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು.
• ಮೌಲ್ಯಮಾಪನ ಕಾರ್ಯಕ್ಕಾಗಿ ಸಂಶೋಧನಾ ಸಂಸ್ಥೆಗಳಿಂದ/ಸಂಸ್ಥೆಗಳಿಂದ/ ವಿಶ್ವವಿದ್ಯಾಲಯಗಳಿಂದ ವ್ಯಕ್ತಪಡಿಸುವ ಆಸಕ್ತಿಯನ್ನು ಅವರು ಆಹ್ವಾನಿಸುವುದು.
• ಅವರು  ಮೌಲ್ಯಮಾಪನ ಅಧ್ಯಯನಗಳನ್ನು ವಹಿಸಲು ಸಂಶೋಧನಾ ಸಂಸ್ಥೆಗಳ/ಸಂಸ್ಥೆಗಳ/ ವಿಶ್ವವಿದ್ಯಾಲಯಗಳ ದಾಖಲಾತಿ ಪಟ್ಟಿಯನ್ನು ತಯಾರಿಸುವುದು.
• ಅವರು  ಮೌಲ್ಯಮಾಪನ ಉದ್ದೇಶಗಳಿಗಾಗಿ, ಹಣಕಾಸು ಹರಾಜುಗಳನ್ನು ಅಹ್ವಾನಿಸುವುದು.
• ಅವರು ಸಂಘದ ಆಡಳಿತಕ್ಕಾಗಿ/ಸಂಘದ ತಾಂತ್ರಿಕ, ಆಡಳಿತಾತ್ಮಕ ಇತರೆ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಾರೆ ಮತ್ತು ಸಂಘದ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ನೇಮಕವನ್ನು ಮಾಡಿಕೊಳ್ಳುವುದು.
• ಅವರು ಎಲ್ಲಾ ತಾಂತ್ರಿಕ  ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸಲು ರಚಿಸಲಾದ ತಾಂತ್ರಿಕ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮಾನವ ಸಂಪನ್ಮೂಲ ಕೈಪಿಡಿಯ ಅನುಬಂಧ-8ರಲ್ಲಿ ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಕಾರ್ಯಕ್ರಮ ವಿಭಾಗದ ನೌಕರರ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ತಯಾರಿಸಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಸಲ್ಲಿಸುವುದು.
 
 

 (ಸಿ) ಆಡಳಿತಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

• ಅವರು ಕರ್ನಾಟಕ ಸರ್ಕಾರವು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವಿವಿಧ ಅಧಿಕಾರಿಗಳಿಗೆ ನಿಯೋಜಿಸಿದ ಆಡಳಿತ ಅಧಿಕಾರಗಳಲ್ಲಿ ಅವರಿಗೆ ನಿಯೋಜಿಸಿದ ಅಧಿಕಾರಗಳನ್ನು ಅವರು ಚಲಾಯಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವಿವಿಧ ಅಧಿಕಾರಿಗಳಿಗೆ ನಿಯೋಜಿಸಿದ ಸಾಮಾನ್ಯ ಹಣಕಾಸು ಅಧಿಕಾರಗಳಲ್ಲಿ ಅವರಿಗೆ ನಿಯೋಜಿಸಿದ ಎಲ್ಲಾ ಅಧಿಕಾರಗಳನ್ನು ಅವರು ಚಲಾಯಿಸುವುದು.
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಆಡಳಿತಾತ್ಮಕ ವಿಷಯಗಳಲ್ಲಿ ಮುಖ್ಯ ಮೌಲ್ಯಮಾಪನಾಧಿಕಾರಿಗಳು/ಸಹಾಯಕ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಅವರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಾಗ ನೆರವಾಗುವುದು.
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ದೈನಂದಿನ ಆಡಳಿತವನ್ನು ನಿರ್ವಹಿಸುವುದು..
• ಅವರಿಗೆ ಅಧಿಕಾರವನ್ನು ನೀಡಿದಾಗಲೆಲ್ಲಾ ಅವರು ಜಂಟಿಯಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಚಕ್ಕುಗಳಿಗೆ ಸಹಿಯನ್ನು ಮಾಡುವುದು.
• ಆಡಳಿತಾಧಿಕಾರಿವರು ಮುಖ್ಯ ಮೌಲ್ಯಮಾಪನಾಧಿಕಾರಿಗಳ ಒಟ್ಟಾರೆ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಕಾರ್ಯವನ್ನು ನಿರ್ವಹಿಸುವುದು..
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಉದ್ಯೋಗಿಗಳಿಗೆ ಸಂಬಳಗಳನ್ನು ಮತ್ತು ಭತ್ಯೆಗಳನ್ನು ಪಾವತಿಸುವ ಅಧಿಕಾರವನ್ನು ಚಲಾಯಿಸುವುದು.
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವಾರ್ಷಿಕ ವರದಿಯನ್ನು ತಯಾರಿಸಲು ಸಹಾಯವನ್ನು ಮಾಡುವುದು.
• ಅವರು ಅನುಮೋದಿತ ಆಯವ್ಯಯ ಮತ್ತು ವಾರ್ಷಿಕ ಕ್ರಿಯಾ ಯೋಜನೆಯಂತೆ, ವೆಚ್ಚದ ಪ್ರಗತಿಯನ್ನು ವೀಕ್ಷಿಸುವುದು.
• ಅವರು ಹಣಕಾಸಿನ ವಿಷಯಗಳಲ್ಲಿ  ಸಂಪೂರ್ಣವಾದ ಸಮಗ್ರತೆಯನ್ನು  ಗಮನಿಸುವುದಲ್ಲದೇ, ವೆಚ್ಚ ಮಾಡಲಾದ ಸಾರ್ವಜನಿಕರ ಹಣಕ್ಕೆ ಅತ್ಯುತ್ತಮ ಮೌಲ್ಯ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು.
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಆಡಳಿತ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.
• ಅವರು ಆಡಳಿತ ವಿಭಾಗಕ್ಕೆ ಕೆಲಸಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮಾನವ ಸಂಪನ್ಮೂಲ ಕೈಪಿಡಿಯ ಅನುಬಂಧ-9ರಲ್ಲಿ ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಕಾರ್ಯಕ್ರಮ ವಿಭಾಗದ ನೌಕರರ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಲ್ಲಿಸುವುದು.
• ಅವರು ಅದರಲ್ಲಿ ಪಟ್ಟಿ ಮಾಡಲಾದ ಎಲ್ಲಾ ಬಾಧ್ಯತೆಗಳಿಗೆ ಹೊಣೆಗಾರರಾಗಿರುವುದು.  
• ಅವರು ಮೌಲ್ಯಮಾಪನ ಸಮಾಲೋಚಕರ ಮತ್ತು ಸ್ವತಂತ್ರ ಮೌಲ್ಯಮಾಪಕರ ದಾಖಲಾತಿ ಪಟ್ಟಿಗಾಗಿ(ಎಂಪೆನೆಲ್‍ಮೆಂಟ್) ರಚಿಸಲಾದ ದಾಖಲಾತಿ ಪಟ್ಟಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದು, ಅವರು ಸದಸ್ಯ ಕಾರ್ಯದರ್ಶಿಯ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸುವುದು..
 
 

(ಡಿ) ಲೆಕ್ಕಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

• ಪ್ರಧಾನ ಕಾರ್ಯದರ್ಶಿಗಳು, ಯೋಜನಾ ಇಲಾಖೆ/ ಮುಖ್ಯ ಮೌಲ್ಯಮಾಪನಾಧಿಕಾರಿಗಳು/ ಹೆಚ್ಚುವರಿ ಮುಖ್ಯ ಮೌಲ್ಯಮಾಪನಾಧಿಕಾರಿಗಳು/ಆಡಳಿತಾಧಿಕಾರಿಗಳು ಇವರಿಗೆ ಲೆಕ್ಕಾಧಿಕಾರಿಯು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಎಲ್ಲಾ ಲೆಕ್ಕಪತ್ರಗಳ ವಿಷಯದಲ್ಲಿ ಸಹಾಯವನ್ನು ಮಾಡುವುದು.  
• ಅವರು ಮುಖ್ಯ ಮೌಲ್ಯಮಾಪನಾಧಿಕಾರಿಗಳು/ ಹೆಚ್ಚುವರಿ ಮುಖ್ಯ ಮೌಲ್ಯಮಾಪನಾಧಿಕಾರಿಗಳು/ಆಡಳಿತಾಧಿಕಾರಿಗಳು ಇವರ ನಿಯಂತ್ರಣದಲ್ಲಿ ಕಾರ್ಯವನ್ನು ನಿರ್ವಹಿಸುವುದು.
• ಅವರು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಖಾತೆಗಳ ನಿಯೋಜನೆಗಳ ಎಲ್ಲಾ ವಹಿಸಿದ ಕಾರ್ಯಗಳನ್ನು ನಿರ್ವಹಿಸುವುದು.
• ಅವರು ಸರ್ಕಾರದ  ಹಣಕಾಸು ನಿಯಮಗಳನ್ನು ಚೆನ್ನಾಗಿ ತಿಳಿದಿರತಕ್ಕದ್ದು.  
• ಅವರು ಎಲ್ಲಾ ವ್ಯವಹಾರಗಳಿಗೆ ಸಂಬಂಧಿಸಿದಂತೆ  ಸರಿಯಾಗಿ ಖಾತೆಗಳನ್ನು ನಿರ್ವಹಿಸಬೇಕು ಮತ್ತು ಸಕಾಲದಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸುವುದು. 
• ಯಾವುದೇ ವಂಚನೆ ದುರ್ಬಳಕೆ ಮತ್ತು ಇತರ ಅಕ್ರಮಗಳು ನಡೆಯದಂತೆ ಖಚಿತಪಡಿಸಿಕೊಳ್ಳಲು ಖಾತೆಗಳ ನಿಯಮಿತವಾದ ತಪಾಸಣೆಯನ್ನು ಕೈಗೊಳ್ಳುವುದು.
• ಸಾರ್ವಜನಿಕ ನಿಧಿಗಳ ಬಳಕೆ ಮತ್ತು ಸರಿಯಾದ ಖಾತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅಧೀನ ಸಿಬ್ಬಂದಿಗಳ ಮೇಲೆ ಬಗ್ಗೆ  ಕಟ್ಟುನಿಟ್ಟಾದ ಮತ್ತು ನಿಕಟ ನಿಯಂತ್ರಣವನ್ನು ಕೈಗೊಳ್ಳುವುದು. 
• ಅವರು ಎಲ್ಲಾ ವ್ಯವಹಾರಗಳನ್ನು  ಖಾತೆಗಳಲ್ಲಿ ನಮೂದಿಸುವುದು ಮತ್ತು ಎಲ್ಲಾ ಸ್ವೀಕೃತಿಗಳನ್ನು ಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಹಾಗೂ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು  ನಿಗದಿಪಡಿಸಿದ ಸಮಯದೊಳಗೆ ಬ್ಯಾಂಕ್/ಖಜಾನೆಗೆ ಜಮಾ ಮಾಡುವುದು ಅಥವಾ ಅರ್ಹವಾದ ಅಧಿಕಾರಿಯಿಂದ ಹೊರಡಿಸಲಾದ ನಿರ್ದಿಷ್ಟ ಆದೇಶಗಳ ಪ್ರಕಾರ ಜಮಾ ಮಾಡುವುದು ಮತ್ತು
• ಸರ್ಕಾರದ ಹಣ ಹೊರತುಪಡಿಸಿ ಎಲ್ಲಾ ಸ್ವೀಕೃತಿಗಳನ್ನು  ಸಾರ್ವಜನಿಕ ಖಾತೆಗೆ ಪಾವತಿಸಬೇಕು. ಯಾವುದೇ ಸಂದರ್ಭದಲ್ಲೂ  ಈ ಹಣವನ್ನು ರಾಜ್ಯ ನಿಧಿಗಳೊಂದಿಗೆ ಬೆರೆಸಬಾರದು.
• ಪ್ರಾಧಿಕಾರದ ಪರವಾಗಿ ಹಣವನ್ನು ಸ್ವೀಕರಿಸುವ ಪ್ರತಿ ಅಧಿಕಾರಿಯು ಹಣವನ್ನು ಪಾವತಿಸುವವರಿಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನಮೂನೆಯಲ್ಲಿ  ರಶೀದಿಯನ್ನು ನೀಡುವುದು.
• ಹಣಕಾಸು ವಿಷಯದಲ್ಲಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯ ಕರ್ತವ್ಯವು ಮೇಲ್ಮಟ್ಟದಲ್ಲಿ  ಪೂರ್ಣವಾಗಿ ಗಮನವನ್ನು ಹರಿಸುವುದಲ್ಲದೇ, ಸಾಧ್ಯವಾದಷ್ಟೂ ವೆಚ್ಚಮಾಡಲಾದ ಹಣದ ಮೌಲ್ಯವು  ಸಾರ್ವಜನಿಕರಿಗೆ ದೊರೆಯುವುದನ್ನು  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ 16 ನೇ ವಿಧಿ(ಆರ್ಟಿಕಲ್À) ಪ್ರಕಾರ ಖಚಿತಪಡಿಸಿಕೊಳ್ಳುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಆಯವ್ಯಯ ಪ್ರಸ್ತಾವನೆಗಳನ್ನು ತಯಾರಿಸಲು ಮತ್ತು ಪರಿಶೀಲಿಸಲು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಹಾಯವನ್ನು ಮಾಡುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಹಣಕಾಸು ಖಾತೆಗಳಿಗೆ ಮತ್ತು ಲೆಕ್ಕಪತ್ರ ಪರಿಶೋಧನೆಗೆ ಸಂಬಂಧಿಸಿದ ವಿಷಯಗಳಿಗೆ  ಅವರು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಆಂತರಿಕ ಆರ್ಥಿಕ ಸಲಹೆಗಾರರಂತೆ ಕಾರ್ಯ ನಿರ್ವಹಿಸುವುದು.
• ಸಂಸ್ಥೆಗಳಿಂದ, ಇಲಾಖೆಗಳಿಂದ ಬಂದಂತಹ  ಹೊಸ ಮೌಲ್ಯಮಾಪನ ಪ್ರಸ್ತಾವನೆಗಳನ್ನು ಪರಿಶೀಲಿಸಲು ಮತ್ತು ಹೊಸ ಅಧ್ಯಯನಗಳನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳುವುದನ್ನು  ಒಪ್ಪಿಕೊಳ್ಳಲು ಅವರು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಹಾಯ ಮಾಡುವುದು.
• ಆಯವ್ಯಯದಲ್ಲಿ ಅನುಮೋದನೆಯಾದ ಹಂಚಿಕೆಗಳನುಸಾರವಾಗಿ ಮತ್ತು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾದಂತೆ, ಇವುಗಳಿಗೆ ಎದುರಾಗಿ ವೆಚ್ಚದ ಪ್ರಗತಿಯನ್ನು ಲೆಕ್ಕಾಧಿಕಾರಿಯು                                        ವೀಕ್ಷಿಸುವುದು.
• ಮಹಾ ಲೇಖಪಾಲರ ಕಛೇರಿಯಲ್ಲಿ ನಿರ್ವಹಿಸಲಾಗಿರುವ ಖಾತೆಗಳ ಪುಸ್ತಕಗಳಂತೆ, ಬ್ಯಾಂಕ್ ಪಾಸ್ ಪುಸ್ತಕಗಳಂತೆ ಮತ್ತು ಖಜಾನೆಗಳ ವಿವರಣಾ ಪಟ್ಟಿಯಂತೆಪ್ರಕರಣದನುಸಾರವಾಗಿ ಭರಿಸಲಾದ ವೆಚ್ಚ ಮತ್ತು ಮಾಡಲಾದ ಸ್ವೀಕೃತಿಗಳ ನಡುವೆ ಸಮನ್ವಯತೆಯನ್ನು ಪಡೆಯುವ ಜವಾಬ್ದಾರಿಯು ಇವರದ್ದಾಗಿರುತ್ತದೆ.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ನಿಧಿಯಿಂದ ಪಾವತಿಗಾಗಿ ಪ್ರಸ್ತುತಪಡಿಸುವ ಬಿಲ್ಲುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅನುಮೋದಿತ ಬಿಲ್ಲುಗಳÀ ಪಾವತಿಗಾಗಿ ಮೇಲಾಧಿಕಾರಿಗಳಿಂದ ಸಕಾಲಿಕ ಅನುಮೋದನೆಯನ್ನು ಪಡೆಯುವುದು.  
• ವಿವಿಧ ರೀತಿಗಳ ಪೀಠೋಪಕರಣಗಳ, ಸಾಮಗ್ರಿಗಳ, ಉಪಕರಣಗಳ, ಸಂಗ್ರಹಗಳ ದಾಸ್ತಾನು ಲೆಕ್ಕಗಳನ್ನು ವಾರ್ಷಿಕ ಪರಿಶೀಲನೆಗಾಗಿ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಲಹೆ ನೀಡುವುದು.
• ಆಯವ್ಯಯ ಲೆಕ್ಕಗಳಿಗೆ ಮತ್ತು ಲೆಕ್ಕ ಪರಿಶೋಧನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಯಾರಿಸಲು  ಮುಖ್ಯ ಮೌಲ್ಯ ಮಾಪನಾಧಿಕಾರಿಗಳು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  ಇವರಿಗೆ ಸಹಾಯ ಮಾಡುವುದು.
• ಸ್ವೀಕೃತಿಗಳು ಮತ್ತು ವೆಚ್ಚದ ಒಂದು ಮಾಸಿಕ ವಿವರಣಾಪಟ್ಟಿಯನ್ನು  ತಯಾರಿಸಿ ಅದನ್ನು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಲ್ಲಿಸುವುದು. 
• ವಿವಿಧ ಸಂಸ್ಥೆಗಳು ಅಂದರೆ ಮಹಾಲೇಖಪಾಲರ ಕಛೇರಿಯ ಮತ್ತು ಚಾರ್ಟರ್ಡ್ ಅಕೌಂಟೆಂಟ್‍ಗಳಿಂದ ಕೈಗೊಳ್ಳಲಾಗುವ ಲೆಕ್ಕಪತ್ರ ಪರಿಶೋಧನೆಗಳು ಸುಗಮವಾಗಿ ನೆರವೇರಲು ಸಹಕರಿಸುವುದು ಮತ್ತು ಲೆಕ್ಕಪತ್ರ ಪರಿಶೋಧನೆಯ ಅವಧಿಯಲ್ಲಿ  ಮಾಡಲಾಗುವ ಅವಲೋಕನಗಳಿಗೆ ಸಮಯೋಚಿತವಾಗಿ ಅನುಸರಣೆಯನ್ನು ಒದಗಿಸುವುದು.  
• ಬಾಕಿ ಇರುವ ಲೆಕ್ಕಪತ್ರ ಆಕ್ಷೇಪಣೆಗಳಿಗೆ ಮತ್ತು ಲೆಕ್ಕಪತ್ರ ಪರಿಶೋಧನೆಯ ಸರಿಪಡಿಸಿದ ವೀಕ್ಷಣೆಗಳಿಗೆ ಒಂದು ದಾಖಲೆ ಪುಸ್ತಕವನ್ನು ನಿರ್ವಹಿಸುವುದು ಮತ್ತು ಆಕ್ಷೇಪಣೆಗಳಿಗೆ ಉತ್ತರಿಸುವ ಬಗ್ಗೆ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ  ವರದಿಯನ್ನು ಸಕಾಲದಲ್ಲಿ ಸಲ್ಲಿಸುವುದು
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಖಾತೆಗಳನ್ನು ಮುಚ್ಚಿದ ನಂತರದಲ್ಲಿ ಅಂತಿಮವಾಗಿ ಖಾತೆಗಳನ್ನು ತಯಾರಿಸಲು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಹಾಯವನ್ನು ಮಾಡುವುದು ಮತ್ತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ತಯಾರಿಸಿ ಇವುಗಳನ್ನು ಸಹಕಾರ ಸಂಘಗಳ ನೋಂದಣಾಧಿಕಾರಿಗಳು, ಮಹಾಲೇಖಪಾಲರು, ಕರ್ನಾಟಕ, ಮತ್ತು ಅಪೇಕ್ಷಿಸಿದರೆ ಚಾರ್ಟರ್ಡ್ ಅಕೌಂಟೆಂಟ್‍ಗಳಿಗೆ ಒದಗಿಸುವುದು.
 
 

 (ಇ) ಸಮಾಲೋಚಕರು (ಸಂಗ್ರಹಣೆ) ಇವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

ಅವರು ಈ ಕೆಳಗಿನ ಕಾರ್ಯಗಳಲ್ಲಿ ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ಸಹಾಯವನ್ನು ಮಾಡುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕಾತಿ ಮಾಡಲು ಸಹಕರಿಸುವುದು.
• ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ದಾಖಲಾತಿ(ಎಂಪೆನಲಿಂಗ್) ಕೈಪಿಡಿಯಲ್ಲಿನ ಮತ್ತು ಕರ್ನಾಟಕದ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ  ಮಾರ್ಗದರ್ಶಿ ಸೂತ್ರಗಳನುಸಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಯೋಗ್ಯರಾದ ಬಾಹ್ಯ ಮೌಲ್ಯಮಾಪನ ಸಮಾಲೋಚಕರನ್ನು ಒಟ್ಟುಗೂಡಿಸಿ ದಾಖಲಾತಿ ಮಾಡುವುದು 
• ಯಾವುದೇ ಯಂತ್ರಗಳನ್ನು/ ಸಾಧನಗಳನ್ನು ಖರೀದಿಸುವುದು.
• ಅವರಿಗೆ ಕಾಲಕಾಲಕ್ಕೆ ವಹಿಸಲಾದ ಯಾವುದೇ ಇತರೆ ಕೆಲಸಗಳನ್ನು ಅವರು ನಿರ್ವಹಿಸುವುದು. 
 
 

(ಎಫ್) ಸಮಾಲೋಚಕರು (ಮೌಲ್ಯಮಾಪನ) ಇವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

 

• ಮುಖ್ಯ ಮೌಲ್ಯಮಾಪನಾಧಿಕಾರಿಗಳ ನೇರ ಮೇಲ್ವಿಚಾರಣೆ ಮತ್ತು ನಿಯಂತ್ರಣದಡಿಯಲ್ಲಿ ಕೆಲಸವನ್ನು ನಿರ್ವಹಿಸುವುದು.
• ಉಲ್ಲೇಖ ನಿಯಮಗಳನ್ನು (ಟರ್ಮ್‍ಸ್ ಆಫ್ ರೆಫರೆನ್ಸ್) ತಯಾರಿಸಲು ಅಗತ್ಯ ವಿವರಗಳನ್ನು ಪಡೆಯಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಹಕರಿಸುವುದು 
• ಅವರು  ಕೇಂದ್ರೀಯ ಪ್ರಾಯೋಜಿತ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು, ನಿಗಮಗಳು, ಮಂಡಳಿಗಳು ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ಕೈಗೊಳ್ಳಲು ಸರ್ಕಾರವು ನಿಯಂತ್ರಣ ಹೊಂದಿರುವ ಇತರೆ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳ/ಕಾರ್ಯಕ್ರಮಗಳ ಉಲ್ಲೇಖ ನಿಯಮಗಳನ್ನು ತಯಾರಿಸುವುದು. 
• ಅವರು ಸರ್ಕಾರದ ಎಲ್ಲಾ ಇಲಾಖೆಗಳ ಮಾಹಿತಿ ಸಂಗ್ರಹಗಳನ್ನು ಪಡೆದುಕೊಳ್ಳುವುದು.
• ಅವರು ಮೌಲ್ಯಮಾಪನ ಕೈಗೊಳ್ಳಲು ಅರ್ಹವಾದ ಯೋಜನೆಗಳ/ಕಾರ್ಯಕ್ರಮಗಳ ಕಿರುಪಟ್ಟಿಯನ್ನು ತಯಾರಿಸಿ ಅದನ್ನು ಮುಖ್ಯ ಮೌಲ್ಯಮಾಪನಾಧಿಕಾರಿಗಳಿಗೆ ತೀರ್ಮಾನ ತೆಗೆದುಕೊಳ್ಳಲು ಮಂಡಿಸುವುದು. 
• ಅವರು ಕಾರ್ಯ ಯೋಜನೆಗೆ ಸಂಬಂಧಿಸಿದ ಪ್ರಾರಂಭಿಕ ವರದಿಗಳ, ಕರಡು ವರದಿಗಳ, ಇತ್ಯಾದಿ ಸಭೆಗಳಲ್ಲಿ, ಪ್ರಸ್ತುತಿಗಳಲ್ಲಿ ಭಾಗವಹಿಸುವುದು ಮತ್ತು ಪರಿಣಾಮಕಾರಿ ಮೌಲ್ಯಮಾಪನಕ್ಕಾಗಿ ಅಭಿಪ್ರಾಯಗಳನ್ನು ನೀಡುವುದು.
• ಉಲ್ಲೇಖ ನಿಯಮಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಒಳಗೊಳ್ಳುವಂತೆ ಅವರು ಒಂದು ಪ್ರಮಾಣಿತ ನಮೂನೆಯನ್ನು ರಚಿಸುವುದು ಮತ್ತು ಅದನ್ನು ಒಂದು ದಾಖಲಾತಿ ಪುಸ್ತಕದಲ್ಲಿ ದಾಖಲಿಸುವುದು.
• ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇವರು ವಹಿಸಿದ ಯಾವುದೇ ಇತರೆ ಕೆಲಸಗಳನ್ನು ನಿರ್ವಹಿಸುವುದು.
 
*****

ಇತ್ತೀಚಿನ ನವೀಕರಣ​ : 15-04-2020 05:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080