ಅಭಿಪ್ರಾಯ / ಸಲಹೆಗಳು

ಬಾಹ್ಯ ಮಾಲ್ಯಮಾಪನ ವರ್ಗೀಕರಣ ವರದಿಗಳು

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಆಯೋಜಿಸಲಾದ ವರದಿಗಳ ಮೌಲ್ಯಮಾಪನ (ಬಾಹ್ಯ ಮೌಲ್ಯಮಾಪನ)

  

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಿಂದ ಆಯೋಜಿಸಲಾದ ಎಲ್ಲಾ ವರದಿಗಳ ಮೌಲ್ಯಮಾಪನ (ಬಾಹ್ಯ ಮಾಲ್ಯಮಾಪನ) ವನ್ನು ಈ ಕೆಳಗಿನ ಹಂತಗಳಲ್ಲಿ ಮಾಡಲಾಗುತ್ತದೆ.

a

ಹಂತ 1

ದಾಖಲಾತಿ ಪಟ್ಟಿಯಲ್ಲಿರುವ (ಎಂಪೆನೆಲಡ್) ಮೌಲ್ಯಮಾಪನ ಸಂಸ್ಥೆಯವರು ಸಲ್ಲಿಸಿದ ಮೌಲ್ಯಮಾಪನ ವರದಿಯನ್ನು ವಿಶೇಷ ಆಹ್ವಾನಿತರ ಅವಶ್ಯಕತೆಯಿದ್ದಲ್ಲಿ ಅವರನ್ನೊಳಗೊಂಡಂತೆ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಒಂದು ತಂಡವು (ಆಂತರಿಕ ಮೌಲ್ಯಮಾಪನ ಸಮಿತಿ ಎಂದು ಕರೆಯಲ್ಪಡುವ ತಂಡವು) ಪರಿಶೀಲಿಸುತ್ತದೆ. ಯೋಜನೆಯು ಮಂಜೂರಾದ ನಂತರದಲ್ಲಿ ಸಂಸ್ಥೆಯವರು ಉಲ್ಲೇಖ ನಿಯಮಗಳಿಗೆ ಮತ್ತು ಪ್ರಾರಂಭಿಕ ವರದಿಗೆ ಅನುಸಾರವಾಗಿ ಸಲ್ಲಿಸಿದ ವರದಿಯನ್ನು ಪ್ರಾಥಮಿಕವಾಗಿ ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ. ಅನುಬಂಧ 1ರಲ್ಲಿ ನೀಡಲಾಗಿರುವ ಪರಿಶೀಲನಾ ಪಟ್ಟಿ ಪ್ರಕಾರವಾಗಿ ಪೂರ್ವಭಾವಿ ಶೋಧನೆಯನ್ನು ಮಾಡಲಾಗುತ್ತದೆ. ಇದಕ್ಕೆ ತೆಗೆದುಕೊಳ್ಳುವ ಸಮಯವು ಸಾಮಾನ್ಯವಾಗಿ 6 ಕೆಲಸದ ದಿನಗಳ ಒಳಗಿರುತ್ತದೆ.

b

ಹಂತ 2

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಆಂತರಿಕ ಮಾಲ್ಯಮಾಪನ ವರದಿಯನ್ನು ಮುಖ್ಯ ಮೌಲ್ಯಮಾಪನಾಧಿಕಾರಿಗಳು/ ಹೆಚ್ಚುವರಿ ಮುಖ್ಯ ಮೌಲ್ಯಮಾಪನಾಧಿಕಾರಿಗಳು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಇವರಿಗೆ ಸಲ್ಲಿಸಲಾಗುತ್ತದೆ. ಅವರು ಈ ಆಂತರಿಕ ಮೌಲ್ಯಮಾಪನ ಸಮಿತಿಯ ಶೋಧನೆಗಳನ್ನು / ಶಿಫಾರಸ್ಸುಗಳನ್ನು ಒಪ್ಪಿಕೊಂಡರೆ, ವರದಿಯನ್ನು ಪುರ್ನರಾವಲೋಖನಕ್ಕಾಗಿ ಓರ್ವ ಮೌಲ್ಯಮಾಪಕರಿಗೆ ಕಳುಹಿಸಲಾಗುತ್ತದೆ. ಆಂತರಿಕ ಮೌಲ್ಯಮಾಪನ ಸಮಿತಿಯು ಉಲ್ಲೇಖ ನಿಯಮ ಅಥವಾ ಪ್ರಾರಂಭಿಕ ವರದಿಯನ್ನು ಆಧರಿಸಿ ಯಾವುದೇ ಮಾರ್ಪಾಡುಗಳನ್ನು ಅಳವಡಿಸಲು ಸಲಹೆ ಮಾಡಿದರೆ ಆಗ ಸಂಸ್ಥೆಯು ಸಲ್ಲಿಸಿದ ವರದಿಗೆ ಮಾಡಲಾದ ಸಲಹೆಗಳನ್ನು ಅಳವಡಿಸಲು ಹಾಗೂ ಅನುಸರಣೆಗಾಗಿ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ಮರುಸಲ್ಲಿಸುವ ವರದಿಯನ್ನು ಪುನ: ಮೌಲ್ಯಮಾಪನ ಸಂಸ್ಥೆಗೆ ಕಳುಹಿಸಲಾಗುತ್ತದೆ.

ಇದಕ್ಕೆ ತೆಗೆದುಕೊಳ್ಳುವ ಸಮಯವು ಸಾಮಾನ್ಯವಾಗಿ 10 ಕೆಲಸದ ದಿನಗಳ ಒಳಗಿರುತ್ತದೆ.

c

ಹಂತ 3

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಿಂದ ಆಯ್ಕೆ ಮಾಡಲ್ಪಟ್ಟ ಸ್ವತಂತ್ರ ಮಾಲ್ಯಮಾಪಕರು ಮೌಲ್ಯಮಾಪನ ವರದಿಯನ್ನು ವಿವರವಾಗಿ ಪರಿಶೀಲಿಸುತ್ತಾರೆ. ಅನುಬಂಧ 2ರಲ್ಲಿ ನೀಡಿದ ವಿವರವಾದ ಮಾರ್ಗಸೂಚಿಗಳ ಆಧಾರದ ಮೇಲೆ ಸ್ವತಂತ್ರ ಮಾಲ್ಯಮಾಪಕರು ಮಾಲ್ಯಮಾಪನ ವರದಿಯ ಪ್ರತಿಯೊಂದು ಅಧ್ಯಾಯಗಳ ಮೌಲ್ಯಮಾಪನವನ್ನು ಮಾಡುತ್ತಾರೆ. ಸ್ವತಂತ್ರ ಮಾಲ್ಯಮಾಪಕರು ಮೌಲ್ಯಮಾಪನ ವರದಿಯ ಪ್ರತಿಯೊಂದು ಅಧ್ಯಾಯಗಳ ಬಗ್ಗೆ ವಿವರಗಳನ್ನು ನೀಡಬೇಕೆಂದು ನಿರೀಕ್ಷಿಸಲಾಗಿರುತ್ತದೆ. ಪರಿಶೀಲನೆಯು ಮುಗಿದ ನಂತರ ಸ್ವತಂತ್ರ ಮೌಲ್ಯಮಾಪಕರು ಯಾವುದೇ ತಿದ್ದುಪಡಿಯಿಲ್ಲದೇ ಮೌಲ್ಯಮಾಪನ ವರದಿಯನ್ನು ಸ್ವೀಕರಿಸಲು ಸೂಚಿಸಬಹುದು ಅಥವಾ ವಿವರವಾದ ವರದಿಯನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರಕ್ಕೆ ನೀಡುವುದರ ಮೂಲಕ ಮೌಲ್ಯಮಾಪನ ವರದಿಯಲ್ಲಿ ಮಾರ್ಪಾಡುಗಳಿಗಾಗಿ ಸೂಚಿಸಿದರೆ, ವರದಿಯಲ್ಲಿ ಈ ಮಾರ್ಪಾಡುಗಳನ್ನು ಅಳವಡಿಸಲು ಮತ್ತು ಮರುಸಲ್ಲಿಸಲು ಕರ್ನಾಟಕ ಮೇಲ್ವಿಚಾರಣೆ ಮತ್ತು ಮಾಲ್ಯಮಾಪನ ಪ್ರಾಧಿಕಾರದಲ್ಲಿ ಎಂಪನೆಲ್‍ಡ್ ಮೌಲ್ಯಮಾಪನ ಸಂಸ್ಥೆಗೆ ವರದಿಯನ್ನು ಕಳುಹಿಸಲಾಗುವುದು. ವರದಿಯನ್ನು ಮರುಸಲ್ಲಿಸಿದ ನಂತರ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಅದೇ ವಿಮರ್ಶಕರಿಗೆ ವರದಿಯನ್ನು ಮತ್ತೊಮ್ಮೆ ಅದೇ ರೀತಿಯ ಪುನರ್ರವಿಮರ್ಶೆಗಾಗಿ ಕಳುಹಿಸುತ್ತದೆ. ವಿಮರ್ಶೆಯ ವರದಿಯ ಜೊತೆಗೆ ಸ್ವತಂತ್ರ ಮೌಲ್ಯಮಾಪನಕರಿಂದ ಮರುಪರಿಶೀಲನೆ ಮಾಡಲಾದ ಮೌಲ್ಯಮಾಪನ ವರದಿಯನ್ನು, ಅಚಿತಿಮ ಅನುಮೋದನೆಗಾಗಿ ಮತ್ತು ಅನುಸರಣೆಗಾಗಿ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ತಾಂತ್ರಿಕ ಸಮಿತಿಗೆ ಮಂಡಿಸಲಾಗುತ್ತದೆ. ಇದಕ್ಕೆ ತೆಗೆದುಕೊಳ್ಳುವ ಸಮಯವು ಸಾಮಾನ್ಯವಾಗಿ 30 ದಿನಗಳ ಒಳಗಿರುತ್ತದೆ.

ಮೇಲೆ ವಿವರಿಸುವಂತೆ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರವು ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಬಂಧ 4ರಲ್ಲಿನ ಚಾಲನಾ ನಕ್ಷೆಯಲ್ಲಿ (ಫ್ಲೋ ಚಾರ್ಟ್) ನೀಡಲಾಗಿದೆ.

d

ಹಂತ 4

ಅನುಬಂಧ 3ರಲ್ಲಿ ನೀಡಲಾದ ಮಂಜೂರಾತಿಗಳ ಪ್ರಕಾರವಾಗಿ 1 ರಿಂದ 10ರವರೆಗಿನ ಅಳತೆಯಲ್ಲಿ ಪ್ರತಿಯೊಂದು ವಿಭಾಗವನ್ನು ಸ್ವತಂತ್ರ ಮೌಲ್ಯಮಾಪಕರು ಮೌಲ್ಯಮಾಪನ ಮಾಡುತ್ತಾರೆ. ಇದನ್ನು ಆಧರಿಸಿ ಮೌಲ್ಯಮಾಪನ ಇದಕ್ಕೆ ನೀಡಬೇಕಾಗಿರುವ ಅಂತಿಮ ಅಂಕಗಳನ್ನು ನೀಡಿ ಈ ವರದಿಯನ್ನು ಅಂತಿಮಗೊಳಿಸಲಾಗುವುದು. ಸಾಮಾನ್ಯವಾಗಿ ಇದಕ್ಕೆ ತೆಗೆದುಕೊಳ್ಳುವ ಸಮಯವನ್ನು ಮೇಲ್ಕಂಡ ಹಂತ 3ರಲ್ಲಿ ಸೇರಿಸಲಾಗುವುದು.

e

ಹಂತ 5

1

ಮೌಲ್ಯಮಾಪನ ವರದಿಯ ಫಲಿತಾಂಶದ ದರ್ಜೆ (ಔಟ್‍ಪುಟ್ ಗ್ರೇಡಿಂಗ್)ಯು ಸ್ವತಂತ್ರ ಮೌಲ್ಯಮಾಪಕರು ಮೇಲ್ಕಂಡ ಕಾರ್ಯವಿಧಾನದ ಪ್ರಕಾರ ಮೌಲ್ಯಮಾಪನ ವರದಿಗೆ ನೀಡುವ ಅಂತಿಮ ಅಂಕಗಳ ಮೇಲೆ ಆಧಾರಿತವಾಗಿರುತ್ತದೆ. ಮೌಲ್ಯಮಾಪನ ವರದಿಗೆ ಈ ಕೆಳಗಿನಂತೆ ಗಳಿಸಿದ ಅಂಕವನ್ನು ಆಧರಿಸಿ ದರ್ಜೆಯನ್ನು ನೀಡಲಾಗುತ್ತದೆ.

ಅಂಕವು 80 ಅಥವಾ ಅದಕ್ಕೆ ಹೆಚ್ಚಾಗಿದ್ದರೆ

ಅಂಕವು 65 ಕ್ಕಿಂತ ಹೆಚ್ಚಾಗಿದ್ದು, 80ಕ್ಕಿಂತ ಕಡಿಮೆ ಇದ್ದರೆ

ಬಿ

ಅಂಕವು 50 ಕ್ಕಿಂತ ಹೆಚ್ಚಾಗಿದ್ದು, 65ಕ್ಕಿಂತ ಕಡಿಮೆ ಇದ್ದರೆ

ಸಿ

2

ವರದಿಯು ಶೇಕಡಾ 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದರೆ ಅದನ್ನು ಕಳಪೆ ಗುಣಮಟ್ಟದ್ದಾಗಿದೆ ಎಂದು ತಿರಸ್ಕರಿಸುವ ಅಗತ್ಯತೆಯಿರುತ್ತದೆ.

3

ಇದಕ್ಕೆ ತೆಗೆದುಕೊಳ್ಳುವ ಸಮಯವು ಸಾಮಾನ್ಯವಾಗಿ 6 ದಿನಗಳಿಗಿಂತ ಕಡಿಮೆಯಿರುತ್ತದೆ.

 

ಇತ್ತೀಚಿನ ನವೀಕರಣ​ : 13-06-2023 09:35 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080